ಆದರ್ಶ ಫಿಲಂ ಸಂಸ್ಥೆಗೆ ಹೊಸ ಸಾರಥಿ ಶ್ರೀ ಎಸ್. ನಾರಾಯಣ್
Posted date: 30 Tue, Jul 2013 – 07:43:07 PM
ಕಳೆದ ಭಾನುವಾರ ಬೆಳಿಗ್ಗೆ ೧೦:೩೦ ಗಂಟೆಗೆ ಹೆಸರಘಟ್ಟದಲ್ಲಿರುವ ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯ ಆವರಣದಲ್ಲಿ ತನ್ನ ೨೦೧೩-೨೦೧೪ ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ಸಮಾರಂಭವವನ್ನು  ಸರಸ್ವತಿ ಪೂಜೆಯೊಂದಿಗೆ ನೆರವೆರಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ವಿಜಯ್ ಕುಮಾರ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡೈಮಂಡ್  ಸ್ಟಾರ್ ಶ್ರೀ. ಶ್ರೀನಗರ ಕಿಟ್ಟಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಬಣಕಾರ್‌ರವರು ಆಗಮಿಸಿದ್ದರು.
                               ಇದೇ ವಿಶೇಷ ಸಂದರ್ಭದಲ್ಲಿ ಎಂಭತ್ತು ವರ್ಷಗಳ ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ಐದು ದಶಕಗಳ ಅಪ್ರತಿಮ ಸೇವೆ ಸಲ್ಲಿಸಿರುವ ಡಾ|| ಲೀಲಾವತಿಯವರಿಗೆ, ಕಲಾತಪಸ್ವಿ ಡಾ|| ರಾಜೇಶ್ ಅವರಿಗೆ, ನಿರ್ಮಾಪಕರು, ವಿತರಕರು ಹಾಗೂ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷರಾದ ಶ್ರೀ ಎ. ಆರ್. ರಾಜು ರವರಿಗೆ ಹಾಗೂ ಪ್ರಖ್ಯಾತ ನಿರ್ಮಾಪಕ-ನಿರ್ದೇಶಕರಾದ ಶ್ರೀ ರಾಜೇಂದ್ರ ಸಿಂಗ್ ಬಾಬು ಅವರಿಗೆ ಗೌರವಪೂರ್ಣವಾಗಿ ಸನ್ಮಾನಿಸಲಾಯಿತು, ಗೌರವವನ್ನು ಸ್ವೀಕರಿಸಿ ಮಾತನಾಡಿದ ಡಾ|| ಲೀಲಾವತಿಯವರು ಕನಸು ಕಾಣುವುದು ಮಾನವನ ಸಹಜ ಗುಣ ಆದರೆ ಇಲ್ಲಿ ಬರುವ ವಿದ್ಯಾರ್ಥಿಗಳು ಸಿನಿಮಾದ ಬಗ್ಗೆ ಕನಸುಗಳನ್ನು ಕಟ್ಟಿಕೊಂಡು ಬಂದಿದ್ದಾರೆ ಅಂತಹ ಕನಸುಗಳನ್ನು ಕಳೆದ ೪೦ ವರ್ಷಗಳಿಂದಲೂ ನನಸಾಗಿಸುವಲ್ಲಿ ಸಂಸ್ಥೆಯು ಶ್ರಮಿಸಿದೆ ಹಾಗೂ ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸಲಿ ಎಂದು ಹಾರೈಸಿದರು.
ಡಾ|| ರಾಜೇಶ್ ರವರು ಮಾತನಾಡುತ್ತ ಚಿತ್ರರಂಗದಲ್ಲಿ ಯಶಸ್ಸನ್ನು ಕಾಣಬೇಕಾದರೆ ವಿದ್ಯಾರ್ಥಿಗಳು ಶ್ರಧ್ಧೆ, ಶಿಸ್ತು, ತಾಳ್ಮೆ, ಹಾಗೂ ಕಠಿಣ ಪರಿಶ್ರಮವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ರಾಜೇಂದ್ರ ಸಿಂಗ್ ಬಾಬುರವರು ಮಾತನಾಡುತ್ತ, ಕನ್ನಡ ಭಾಷೆ, ಕನ್ನಡ ಚಿತ್ರರಂಗದ ಉಳುವಿಗಾಗಿ ಹೊರಡುತ್ತೇವೆ, ಹಾಗೂ ದೊಡ್ಡಮಟ್ಟದಲ್ಲಿ ಚಿತ್ರಗಳನ್ನು ನಿಡುತ್ತೇವೆ. ಬೇರೆ ಚಿತ್ರಗಳಿಗೆ ಕನ್ನಡಿಗರು ಅವಕಾಶ ಮಾಡಿಕೊಡದೆ ಕನ್ನಡವನ್ನು, ಕನ್ನಡ ಚಿತ್ರರಂಗವನ್ನು ಅಭಿಮಾನಿಸಬೇಕೆಂದು ಕನ್ನಡ ಜನತೆಯಲ್ಲಿ ಕೇಳಿಕೊಂಡರು.
ಶ್ರೀ ಎ.ಆರ್.ರಾಜುರವರು ಸಂಸ್ಥೆಯ ನಲವತ್ತು ವರ್ಷಗಳ ನಡೆದು ಬಂದ ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತ, ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಬಿ.ಆರ್.ಪಿ. ಸ್ವಾಮಿಯವರು ಕಂಡ ಕನಸು ಮತ್ತು ಪರಿಶ್ರಮದ ಫಲವಾಗಿ ಸಂಸ್ಥೆಯು ಬೃಹಾದಾಕಾರವಾಗಿ ಬೆಳೆದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ೨೦೧೨-೧೩ ನೇ ಸಾಲಿನಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಡಿಪ್ಲೊಮಾ ಸರ್ಟಿಫಿಕೆಟ್ ನ್ನು ಶ್ರೀ ಶ್ರೀನಗರ ಕಿಟ್ಟಿಯವರು ವಿತರಿಸಿದರು.
ಸಂಸ್ಥೆಯ ಸರ್ವತೋಮುಖ ಏಳಿಗಾಗಿ ಕಳೆದ ಹದಿನೆಂಟು ವರ್ಷಗಳಕಾಲ ಕಾಲ ಹಗಲಿರುಳೂ ದುಡಿದು, ಯಶಸ್ಸಿನ ಉತ್ತುಂಗಕ್ಕೇರಿಸಿದ ಪ್ರಾಂಶುಪಾಲರಾದ ಶ್ರೀ ದೊರೆ ಭಗವಾನ್ ರವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ತುಂಬಾ ಭಾವುಕರಾದ ಭಗವಾನ್ ರವರು ಸಂಸ್ಥೆಯ ಕಾರ್ಯವೈಖರಿ, ವ್ಯವಸ್ಥಾಪಕರೊಂದಗಿನ ಒಡನಾಟ  ಬಾಂಧವ್ಯವನ್ನು ಹಾಗೂ ತಮ್ಮ ಸುಧೀರ್ಘ ಅನುಭವಗಳನ್ನು ಹಂಚಿಕೊಂಡರು.
ಪ್ರಖ್ಯಾತ ನಿರ್ಮಾಪಕ-ನಿರ್ದೇಶಕ ಹಾಗೂ ನಟರಾದ ಶ್ರೀ ಎಸ್. ನಾರಾಯಣ್ ರವರು ಸಂಸ್ಥೆಯ ನೂತನ ಪ್ರಾಂಶುಪಾಲರಾಗಿ ಪದಗ್ರಹಣ ಮಾಡಿದರು. ಶ್ರೀ ಎಸ್. ನಾರಾಯಣ್ ರವರು ಮಾತನಾಡುತ್ತ ತಾವಿನ್ನೂ ವಿದ್ಯಾರ್ಥಿ, ಕಲಿಯುವುದು ಇನ್ನೂ ಸಾಕಷ್ಟಿದೆ ಆದರೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಲಹಾ ಮಂಡಳಿಯ ಅಧ್ಯಕ್ಷರಾದ ಶ್ರೀ ಎ. ಆರ್ ರಾಜುರವರು ಪ್ರಾಂಶುಪಾಲರಾಗಿ ನೇಮಿಸಿದ್ದಾರೆ ಎಂದು ಹೇಳಿದರು. 
 ಶ್ರೀ ನಾಗೇಂದ್ರ ರಾವ್, ಶ್ರೀ ಬಿ. ವಿ .ಕಾರಂತ್, ಶ್ರೀ ಗಿರೀಶ್ ಕಾಸರವಳ್ಳಿ. ಶ್ರೀ ಟಿ. ಎಸ್ ನಾಗಾಭರಣ ಹಾಗೂ ಶ್ರೀ ದೊರೆ-ಭಗವಾನ್ ರಂತ ಅತಿರಥ ಮಹಾರಥ ಪ್ರಾಂಶುಪಾಲರ ಸ್ಥಾನಕ್ಕೆ ತಮ್ಮನ್ನು ವಹಿಸಿದ್ದು ಜವಾಬ್ದಾರಿಯನ್ನು ಹೆಚ್ಚಿಸಿದೆ, ಹಾಗೂ ಸಂಸ್ಥೆಗೆ ಹೊಸ ರೂಪರೇಶೆಗಳನ್ನು ಹಾಕಿಕೊಂಡು ಏಳಿಗೆಗಾಗಿ ಶ್ರಮಿಸುವುದಾಗಿ ಹೇಳಿದರು.
ಕನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ವಿಜಯ್ ಕುಮಾರ್ ಮಾತನಾಡುತ್ತ ಸಂಸ್ಥೆಗೆ ಹಾಗೂ ವಿದ್ಯಾರ್ಥಿಗಳಿಗೆ ವಾಣಿಜ್ಯ ಮಂಡಳಿಯ ಸಂಪೂರ್ಣ ಸಹಕಾರ ಎಂದೆಂದಿಗೂ ಇರುತ್ತದೆ ಎಂದು ಹೇಳಿದರು. 
ಶ್ರೀ ಅನಿಲ್ ಅಂಬಾರಿ ಹಾಗು ಶ್ರೀಧರ್ ಅವರು ಕಾರ್ಯಕ್ರಮವನ್ನು ತುಂಬಾ ಅಚ್ಚು ಕಟ್ಟಾಗಿ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕಳೆದ ಸಾಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನೆರೆದಿದ್ದ ಪೋಷಕರಿಗೆ ಮನರಂಜನೆ ನೀಡಿದ್ದಲ್ಲದೆ ಹೋಸ ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ತುಂಬಿದರು.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed